ನಂದಿಗಿರಿಧಾಮ

ಮಂಜಿನ ದೃಶ್ಯ                                                           ನೆಲ್ಲಿಕಾಯಿ ಬಸವಣ್ಣ

                       

 

ಮುಖ್ಯ ಪ್ರವೇಶದ್ವಾರ                                         ನೆಹರು ನಿಲಯ(ಕಬ್ಬನ್ ಹೌಸ್)

                       

 

ನಂದಿಗಿರಿಧಾಮವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೌಗೊಳಿಕವಾಗಿ ಆಶ್ರಯ ಪಡೆದಿದ್ದು ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ ಅತ್ಯಂತ ಸನಿಹದಲ್ಲಿರುವ ವಿಶ್ವ ಪ್ರಸಿದ್ದ ಪ್ರವಾಸಿ ತಾಣವಾಗಿರುತ್ತದೆ. ಕರ್ನಾಟಕ ರಾಜ್ಯದ ಹೆಮ್ಮೆಯ ಪ್ರತೀಕವಾದ ಗಿರಿಧಾಮವು ಒಂದು ಅಂತರರಾಷ್ಟ್ರೀಯ ಸ್ಮಾರಕವಾಗಿರುತ್ತದೆ. ನಂದಿಗಿರಿಧಾಮದ ನೈಸರ್ಗಿಕ ಸೌಂದರ್ಯ, ಅಹ್ಲಾದಕರವಾದ ಹವಾಗುಣ, ಮನಮೋಹಕ ಪ್ರಕೃತಿಯ ರಮಣೀಯ ದೃಶ್ಯಾವಳಿ ಮತ್ತು ಪ್ರಶಾಂತತೆಯು ದೇಶದ ಗಣ್ಯಾತಿಗಣ್ಯ ಪ್ರವಾಸಿಗರನ್ನಲ್ಲದೇ ವಿದೇಶಿ ರಾಷ್ಟ್ರಾಧ್ಯಕ್ಷರು ಹಾಗೂ ಪ್ರಧಾನಿಗಳನ್ನು ಆಕರ್ಷಿಸುತ್ತಿರುವ ಪ್ರವಾಸಿ ತಾಣವಾಗಿದೆ. ಗಿರಿಧಾಮದ ಸುಂದರ ಮನಮೋಹಕ ಹವಾಗುಣವನ್ನು ಸವಿಯಲು ಪ್ರತಿದಿನ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.

ಸುಂದರವಾದ ನಂದಿಗಿರಿಧಾಮವು ಪಂಚಗಿರಿಗಳ ಕ್ಷೇತ್ರವಾಗಿದ್ದು ಸುತ್ತಲು ನಂದಿಗಿರಿ, ದಿವ್ಯಗಿರಿ, ಬ್ರಹ್ಮಗಿರಿ, ಚೆನ್ನಗಿರಿ ಹಾಗೂ ಸ್ಕಂದಗಿರಿಗಳು ಸುತ್ತುವರೆದು ಗಿರಿಧಾಮದ ಹವಾಗುಣವನ್ನು ಮತ್ತಷ್ಟು ರಮಣೀಯಗೊಳಿಸಿದೆ. ಇತಿಹಾಸದ ಪೂರ್ವಾವಧಿಯಿಂದ ಯೋಗ ಮತ್ತು ಆರೋಗ್ಯ ಸುಧಾರಣೆಗಾಗಿ ಬಳಸಿಕೊಂಡಿರುವುದು ಗಮನಾರ್ಹವಾಗಿದೆ. ಗಿರಿಧಾಮದಲ್ಲಿ ಪಾಳೇಗಾರರು, ರಾಜವಂಶಗಳು, ಬ್ರಿಟೀಷ್ ಆಳ್ವಿಕೆಯ ಹೆಗ್ಗುರುತುಗಳಾಗಿ ಇಂದಿಗೂ ಗತಕಾಲದಲ್ಲಿನ ಕೋಟೆಗಳನ್ನು ಕಾಣಬಹುದು. ಪ್ರದೇಶವನ್ನು ನೊಳಂಬರು, ರಾಷ್ಟ್ರಕೂಟರು, ಬಾಣ ವಂಶದವರು, ಗಂಗರು, ಚೋಳರು, ಮರಾಠರು, ವಿಜಯನಗರ ಸಾಮ್ರಾಜ್ಯದವರು, ಹೈದರಾಲಿ, ಟಿಪ್ಪು ಸುಲ್ತಾನ್, ಆಳ್ವಿಕೆ ನಡೆಸಿರುವುದು ಶಾಸನಗಳಿಂದ ದೃಡಪಟ್ಟಿದೆ. ಟಿಪ್ಪು ಸುಲ್ತಾನನ ನಂತರ ಬ್ರಿಟಿಷರ ಆಡಳಿತಕ್ಕೆ ಒಳಗಾಗಿದೆ. ಗಿರಿಧಾಮದ ನೈಜ ಸೌಂದರ್ಯ, ಸೊಬಗು ಹಾಗೂ ಇಲ್ಲಿನ ನಿಸರ್ಗ ಪ್ರಾಕೃತೀಕವಾಗಿದೆ. ಇಲ್ಲಿ ಔಷಧೀಯ ಸಸ್ಯ ಸಂಪತ್ತನ್ನು ತನ್ನ ಮಡಿಲಲ್ಲಿರಿಸಿ ಕೊಂಡಿರುತ್ತದೆ. ಗಿರಿಧಾಮದಲ್ಲಿ ಅರ್ಕಾವತಿ, ಪಾಲರ್(ದಕ್ಷಿಣ ಪಿನಾಕಿನಿ) ನದಿಗಳು ಹಾಗೂ ಸುತ್ತಲಿನ ಬೆಟ್ಟಗಳಲ್ಲಿ ಉತ್ತರ ಪಿನಾಕಿನಿ, ಪೆನ್ನಾರ್, ಚಿತ್ರಾವತಿ ನದಿಗಳು ಉಗಮಗೊಳ್ಳುವ ಸ್ಥಾನವಾಗಿರುತ್ತದೆ.

1. ನಂದಿಗಿರಿಧಾಮದಲ್ಲಿ ಮಾನವ ವಸತಿ ಎಂದಿನಿಂದ ಆರಂಭವಾಯಿತೆಂದು ಮಾಹಿತಿಯಿಲ್ಲ. ಸಾವಿರಾರು ವರ್ಷಗಳ ಹಿಂದೆ ಕೂಷ್ಮಾಂಡ ಋಷಿಯು ಇಲ್ಲಿ ತಪ್ಪಸ್ಸು ಮಾಡಿದ ಕಾರಣ ಇದನ್ನು ಕೂಷ್ಮಂಡಗಿರಿ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ. ಚೋಳರ ಅವಧಿಯಲ್ಲಿ ಇದನ್ನು ಆನಂದಗಿರಿ ಎಂದು ಕರೆಯುತ್ತಿದ್ದರೆಂದು, ಶಿವನ ಆಶೀರ್ವಾದದಿಂದ ಚೋಳರು ಶ್ರೀ ಯೋಗನಂದೀಶ್ವರ ದೇವಸ್ಥಾನವನ್ನು ನಿರ್ಮಿಸಿದ ನಂತರ ಇದು ನಂದಿಗಿರಿ ಎಂದು ಕರೆಯಲಾಗುತ್ತಿದೆಯೆಂದು ಪ್ರಚಲಿತದಲ್ಲಿದೆ. ಸದರಿ ದೇವಸ್ಥಾನವು ಮುಜರಾಯಿ ಇಲಾಖೆಯ ಸ್ವಾಮ್ಯದಲ್ಲಿ ನಿರ್ವಹಿಸಲಾಗುತ್ತಿದೆ.

2. ಟಿಪ್ಪು ಸುಲ್ತಾನ್ ಗಂಗರ ಕಾಲದಲ್ಲಿ ಚಿಕ್ಕಬಳ್ಳಾಪುರದ ಪಾಳೆಗಾರರು ರಕ್ಷಣೆಗಾಗಿ ಕಟ್ಟಿದ ಕೋಟೆಯನ್ನು ಟಿಪ್ಪು ಸುಲ್ತಾನ್ 1726-1795 ಅವಧಿಯಲ್ಲಿ ಇನ್ನಷ್ಠು ಭದ್ರಪಡಿಸಿ ಒಂದು ವಿಶ್ರಾಂತಿ ಬಂಗಲೆಯನ್ನು ನಿರ್ಮಿಸಿದರು. ಇವರ ಕಾಲದಲ್ಲಿ ತಪ್ಪತಸ್ತರು/ಖೈದಿಗಳನ್ನು ಶಿಕ್ಷಿಸಲು ನಿರ್ಧಾಕ್ಷಣ್ಯದಿಂದ ತಳ್ಳುತ್ತಿದ್ದ ಘೋರ ಕಂದರವನ್ನು ಟಿಪ್ಪು ಡ್ರಾಪ್ ಎಂದು ಕರೆಯಲಾಯಿತು. ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯು ಹಾಲಿ ಪುರಾತತ್ವ ಇಲಾಖೆಯ ಅಧೀನದಲ್ಲಿರುತ್ತದೆ.

3. ಮೇಜರ್ ಜನರಲ್ ಸರ್ ಲಾರ್ಡ್ ಮಾರ್ಕ್ ಕಬ್ಬನ್-1832 ರಲ್ಲಿ ನೆಹರು ನಿಲಯ(ಕಬ್ಬನ್ ಅತಿಥಿಗೃಹ)ವನ್ನು ಕಟ್ಟಿಸಿರುತ್ತಾರೆ. ಸದರಿ ಕಟ್ಟಡವು ಚೌಕಾಕಾರದಲ್ಲಿದ್ದು, ನಾಲ್ಕು ಕಡೆ ಗಾಳಿ ಬೆಳಕು ಸಮಪಾಲಿನಲ್ಲಿ ಚಲಿಸುತ್ತಿರುತ್ತದೆ.1986ರಲ್ಲಿ ಶ್ರೀ ರಾಜೀವ ಗಾಂಧಿ ಪ್ರಧಾನಿ ಮಂತ್ರಿಯಾಗಿದ್ದ ಅವಧಿಯಲ್ಲಿ ಸಾರ್ಕ್ ಶೃಂಗ ಸಭೆಯಲ್ಲಿ ಇಲ್ಲಿ ನಡೆಸಲಾಗಿದ್ದು, ಗಿರಿಧಾಮವನ್ನು ವಿಶ್ವಮಟ್ಟದ ಪಾರಂಪರಿಕ ಮತ್ತು ಆರೋಗ್ಯಧಾಮವೆಂದು ಗುರ್ತಿಸಿರುವುದು ಸಹ ದಾಖಲೆಗಳಲ್ಲಿ ನಮೂದಿಸಿದೆ. ಪ್ರಸ್ತುತ ಇದನ್ನು ಸಾರ್ವಜನಿಕ ಅತಿಥಿಗೃಹವನ್ನಾಗಿ ಮಾರ್ಪಡಿಸಿ, ತೋಟಗಾರಿಕೆ ಇಲಾಖೆವತಿಯಿಂದ ನಿರ್ವಹಿಸಲಾಗುತ್ತಿದೆ.

4. ಗಾಂಧಿ ನಿಲಯ-1852ರಲ್ಲಿ ಅಲಕ್ಸಾಂಡರ್ ಕನ್ನಿಂಗ್ ಹಾಮ್ ರವರು ಗಾಂಧಿ ನಿಲಯ(ಓಕ್ ಲೇನ್ ಅತಿಥಿಗೃಹ) ನಿರ್ಮಿಸಿರುತ್ತಾರೆ. ವಸತಿ ಗೃಹದಲ್ಲಿ ಮಹತ್ಮಾ ಗಾಂಧಿಯವರು 1927 ಹಾಗೂ 1936ರಲ್ಲಿ 66 ದಿನಗಳ ಕಾಲ ವಿಶ್ರಾಂತಿ ಪಡೆದಿರುತ್ತಾರೆ, ಹಾಲಿ ಡಿ.ಪಿ..ಆರ್.(ಶಿಷ್ಟಾಚಾರ) ಇಲಾಖೆವತಿಯಿಂದ ಗಣ್ಯ ವ್ಯಕ್ತಿಗಳ ವಾಸ್ತವ್ಯಕ್ಕಾಗಿ ವಸತಿ ಗೃಹವನ್ನು ನಿರ್ವಹಿಸಲಾಗುತ್ತಿದೆ.

5. ಗಿರಿಧಾಮವು 1914ನೇ ಇಸವಿಯಿಂದ ತೋಟಗಾರಿಕೆ ಇಲಾಖೆ ವಶದಲ್ಲಿದ್ದು ಗಿರಿಧಾಮದ ಉದ್ಯಾನವನವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಗಿರಿಧಾಮದ ಭೂ ಪ್ರದೇಶವು ಸುಮಾರು 90 ಎಕರೆವಿದ್ದು, ಶೇ.75 ಭಾಗ ಇಳಿಜಾರು ಪ್ರದೇಶ ಮತ್ತು ಕಲ್ಲು ಬಂಡೆಯಿಂದ ಕೂಡಿದ ಪ್ರದೇಶವಾಗಿರುತ್ತದೆ. ಇನ್ನುಳಿದ ಶೇ.25 ಭಾಗದಲ್ಲಿ ಅತಿಥಿ ಗೃಹಗಳು, ದೇವಸ್ಥಾನ, ಹೋಟೇಲ್ನ ಕಟ್ಟಡಗಳು ಮತ್ತು ಉದ್ಯಾನವನವನ್ನಾಗಿ ಪ್ರಸ್ತುತ ನಿರ್ವಹಿಸಲಾಗುತ್ತಿದೆ.

ನಂದಿಗಿರಿಧಾಮವು ಹಲವು ಪ್ರೇಕ್ಷಣೀಯ ಸ್ಥಳವನ್ನು ಒಳಗೊಂಡಿದ್ದು, ಅವುಗಳೆಂದರೆ

) ಯೋಗನಂದೀಶ್ವರ ದೇವಸ್ಥಾನ : ನಂದಿಗಿರಿಧಾಮದ ಶಿಖರದಲ್ಲಿ ಗಂಗರ (10ನೇ ಶತಮಾನ) ಕಾಲದಲ್ಲಿ ನಿರ್ಮಾಣಗೊಂಡು, ಚೋಳರ ಮತ್ತು ವಿಜಯನಗರ ಸಂಸ್ಥಾನದವರ ಕಾಲದಲ್ಲಿ ಅಭಿವೃದ್ಧಿಗೊಂಡ ದೇವಾಲಯ. ದ್ರಾವಿಡ ಶೈಲಿಯ ವಾಸ್ತುಶಿಲ್ಪಿ ವಿನ್ಯಾಸವನ್ನು ಒಳಗೊಂಡಿದೆ.

) ನೆಲ್ಲಿಕಾಯಿ ಬಸವಣ್ಣ ದೇವಸ್ಥಾನ: 10 ಅಡಿ ಉದ್ದ 6 ಅಡಿ ಎತ್ತರದ ಚೋಳರ ಶೈಲಿಯಲ್ಲಿ ಕೆತ್ತಿರುವ ಸಂದರವಾದ ನಂದಿ ಶಿಲ್ಪಿ ಗಿರಿಧಾಮದ ಪೂರ್ವ ಭಾಗದಲ್ಲಿ ಇದೆ. ಇದರ ಮುಂದೆ ನೆಲ್ಲಿಕಾಯಿ ಮರ ಇರುವುದರಿಂದ  ಹೆಸರು ಬಂದಿದ್ದು, ಶಿಲಾ ಮಂಟಪವು ಸುಂದರವಾಗಿದೆ.

) ಟಿಪ್ಪು ಡ್ರಾಪ್ : ಟಿಪ್ಪು ಸುಲ್ತಾನನ ಕಾಲದಲ್ಲಿ ತಪ್ಪತಸ್ತರನ್ನು ಹಾಗೂ ಕೈದಿಗಳನ್ನು ತಳ್ಳುತ್ತಿದ್ದ ಸುಮಾರು 600 ಅಡಿ ಆಳದ ಕಂದಕ.

) ಟಿಪ್ಪುವಿನ ಬೇಸಿಗೆ ಮನೆ: ಟಿಪ್ಪುವಿನ ವಸತಿಗೃಹವು ಕೋಟೆಯ ಒಳಗಡೆ ಪ್ರವೇಶ ದ್ವಾರದ ಒಂದು ಶೀಖರದ ಮೇಲೆ ಕಟ್ಟಿರುವ ಎರಡು ಅಂತಸ್ತಿನ ಆಯತಾಕಾರದ 12*7 ಮೀಟರ್.

) ಪಾಲರ್ ನದಿ ಮೂಲ: ಪಾಲಾರ್ (ಕ್ಷೀರ ನದಿ) ನದಿಯು ಗಿರಿಧಾಮದಲ್ಲಿ ಉಗಮವಾಗಿ ದಕ್ಷಿಣಾಭಿಮುಖವಾಗಿ ಹರಿದು ತಮಿಳುನಾಡಿನಲ್ಲಿ ಕಛೇರಿ ನದಿ ಸೇರಿಕೊಳ್ಳುತ್ತದೆ.

) ಆರ್ಕಾವತಿ ನದಿ ಮೂಲ : ಅರ್ಕಾವತಿ ನದಿಯು ಗಿರಿಧಾಮದಲ್ಲಿ ಉಗಮವಾಗಿ ಪಶ್ವಿಮಾಭಿಮುಖವಾಗಿ ಹರಿದು ಸಂಗಮದಲ್ಲಿ ಕಾವೇರಿಯನ್ನು ಸೇರಿಕೊಳ್ಳುತ್ತದೆ. ನದಿಗೆ ತಿಪ್ಪಗೊಂಡನಹಳ್ಳಿಯಲ್ಲಿ ಜಲಾಶಯ ನಿರ್ಮಿಸಲಾಗಿದೆ.

) ಅಮೃತ ಸರೋವರ : ಸ್ವಚ್ಚ ತಿಳಿ ನೀರಿನಿಂದ ಕೂಡಿರುವ ಸರ್ವಋತು ಸರೋವರ. ಹಿಂದಿನ ಕಾಲದಲ್ಲಿ ಗಿರಿಧಾಮದ ನೀರಿನ ಅವಶ್ಯಕತೆಗೆ ಸರೋವರವನ್ನು ಅವಲಂಭಿಸಲಾಗಿತ್ತು.

) ಅಂತರಗಂಗೆ : ಸದ ಕಾಲ ನೀರು ಇರುತ್ತದೆ.

) ಕುದುರೆ ಮೆಟ್ಟಿಲು: ಹಿಂದಿನ ಕಾಲದಲ್ಲಿ ಮೇಲೆ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದ ಮಾರ್ಗವೆಂದು ತಿಳಿದು ಬಂದಿದೆ. ಇದನ್ನು ಕೂಲಿ ದಾರಿ ಎಂದು ಕರೆಯುತ್ತಿದ್ದರು.

) ಗವಿ ವೀರಭದ್ರ ಸ್ವಾಮಿ ದೇವಾಲಯ: ನಂದಿ ಬೆಟ್ಟಕ್ಕೆ ಹತ್ತುವ ಮೆಟ್ಟಿಲು ದಾರಿಯಲ್ಲಿ ದೇವಾಲಯವಿದೆ. ಇದನ್ನು 11ನೇ ಶತಮಾನದಲ್ಲಿ ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಿರಬಹುದೆಂದು ತಿಳಿದು ಬಂದಿದೆ. ಇಲ್ಲಿರುವ ಶಾಸನದಲ್ಲಿ 1397ರಲ್ಲಿ ಕನ್ನಪ್ಪರಾಯನ ಮಗನಾದ ದೇವಯ್ಯನು ಬಾಗಿಲು ಮಾಡಿಸಿದನೆಂದು ಲಿಖಿತವಾಗಿದೆ.

) ಬ್ರಹ್ಮಾಶ್ರಮ ಗುಹೆ: ಕಲ್ಲುಬಂಡೆಯಿಂದ ನಿರ್ಮಿತವಾದ ಬ್ರಹ್ಮಾಶ್ರಮ ಆದ್ಯಾತ್ಮಿಕ ಚಿಂತಕರಿಗೆ ಆದರ್ಶದ ಸ್ಥಳ.

) ನೆಹರು ನಿಲಯ (ಕಬ್ಬನ್ ಹೌಸ್): ಸರ್ ಮಾರ್ಕ್ ಕಬ್ಬನ್ ಕೆ.ಸಿ.ಬಿ ರವರು 1834 ರಿಂದ 1961ರವರೆಗೆ ಮೈಸೂರು ರಾಜ್ಯದ ಕಮೀಷನರ್ ಆಗಿದ್ದು, ಅವರು ಬೇಸಿಗೆಯ ವಾಸದ ಬಂಗಲೆಯನ್ನಾಗಿ ಉಪಯೋಗಿಸುತ್ತಿದ್ದರು. 1986ರಲ್ಲಿ ಸಾರ್ಕ್ ಸಮ್ಮೇಳನವು ಬಂಗಲೆಗೆ ವಾಸದ ಬಂಗಲೆಯನ್ನಾಗಿ ಉಪಯೋಗಿಸಿಸುತ್ತಿದ್ದರು. 1986ರಲ್ಲಿ ಸಾರ್ಕ್ ಸಮ್ಮೇಳನವು ಬಂಗಲೆಯಲ್ಲಿ ನಡೆಯಿತು. ಪ್ರಸ್ತುತ ಇದನ್ನು ಸಾರ್ವಜನಿಕ ಅತಿಥಿಗೃಹವನ್ನಾಗಿ ಪರಿವರ್ತಿಸಲಾಗಿದೆ.

) ಗಾಂಧಿ ನಿಲಯ : 1927 ಹಾಗೂ 1936ರಲ್ಲಿ ಮಹಾತ್ಮ ಗಾಂಧಿಯವರು ಒಟ್ಟು 66 ದಿನ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆದಿರುತ್ತಾರೆ. ಪ್ರಸ್ತುತ ಇದನ್ನು ಗಣ್ಯರ ಅತಿಥಿ ಗೃಹವಾಗಿ ಡಿ.ಪಿ..ಆರ್. (ಶಿಷ್ಠಾಚಾರ) ವಿಭಾಗದಿಂದ ಕಾಯ್ದಿರಿಸಲಾಗುತ್ತಿದೆ.

ಅಂ) ಗಿರಿಧಾಮದ ಗುಪ್ತದ್ವಾರ : ನಂದಿಬೆಟ್ಟದ ಪಶ್ಚಿಮ ದಿಕ್ಕಿನಲ್ಲಿ ಗುಪ್ತದ್ವಾರವಿದ್ದು ಅಪತ್ತಿನ ಕಾಲದಲ್ಲಿ ರಾಜರು ಇಲ್ಲಿಂದ ತಪ್ಪಿಸಿ ಕೊಳ್ಳುತ್ತಿದ್ದರೆನ್ನಲಾಗಿದೆ.

ಆಃ) ಉದ್ಯಾನವನಗಳು, ಮಕ್ಕಳ ಆಟದ ಮೈದಾನ, ವಿವಿಧ ಜಾತಿಯ ಮರಗಳು, ಅಲಂಕಾರಿಕ ಗಿಡಗಳು.

 

ನಂದಿಗಿರಿಧಾಮದಲ್ಲಿ ನೆಹರು ನಿಲಯದ ನಾಲ್ಕು ವಿ.ವಿ..ಪಿ. ಅತಿಥಿ ಗೃಹಗಳು, ಆರು ವಿ..ಪಿ. ಕುಟೀರಗಳು ಹಾಗೂ 14 ಸಾಮಾನ್ಯ ಕೊಠಡಿಗಳನ್ನು ಇಲಾಖೆಯ ವತಿಯಿಂದ ನಿರ್ವಹಿಸಲಾಗುತ್ತಿದೆ.

ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಹೋಟೆಲ್ ಮಯೂರ ಪೈನ್ ಟಾಪ್ನಲ್ಲಿರುವ ನಾಲ್ಕು ಅತಿಥಿ ಗೃಹಗಳು, ಗಾಂಧಿನಿಲಯದ ನಾಲ್ಕು ವಿ.ವಿ..ಪಿ ಅತಿಥಿ ಗೃಹಗಳು ಹಾಗೂ 12 ಕಾಟೇಜುಗಳು ಕೆ.ಎಸ್.ಟಿ.ಡಿ.ಸಿ ವತಿಯಿಂದ ನಿರ್ವಹಿಸಲಾಗುತ್ತಿದೆ.

ಗಿರಿಧಾಮದಲ್ಲಿ ಬೆಸ್ಕಾಂ ಇಲಾಖೆಯ ಅಧೀನದ ನಾಲ್ಕು ಅತಿಥಿ ಗೃಹಗಳಿದ್ದು, ಬೆಸ್ಕಾಂ ಇಲಾಖೆಯು ನಿರ್ವಹಿಸುತ್ತಿದೆ, ಆದೇ ರೀತಿ ಲೋಕೋಪಯೋಗಿ ಇಲಾಖೆಯ ನಾಲ್ಕು ಅತಿಥಿ ಗೃಹಗಳನ್ನು ಅವರೇ ನಿರ್ವಹಿಸುತ್ತಿದ್ದಾರೆ.

ಪ್ರವಾಸಿಗರ ಅನುಕೂಲಕ್ಕಾಗಿ ಹಾಪ್ ಕಾಮ್ಸ್ ವತಿಯಿಂದ ಹಣ್ಣು ಮಾರಾಟ ಮಳಿಗೆ ಹಾಗೂ ಕೆ.ಎಂ.ಎಫ್. ವತಿಯಿಂದ ಜೂಸ್ ಮತ್ತು ಐಸ್ ಕ್ರೀಂ ಮಾರಾಟ ಮಳಿಗೆ ಸ್ಥಾಪಿಸಲಾಗಿದೆ.

ಮುಜರಾಯಿ ಇಲಾಖೆಯ ವತಿಯಿಂದ ಶ್ರೀ ಯೋಗನಂದೀಶ್ವರ ದೇವಾಲಯವನ್ನು ನಿರ್ವಹಿಸಲಾಗುತ್ತಿರುತ್ತದೆ.

 

ಪ್ರವೇಶ ಸಮಯ : ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ

ಸಾರಿಗೆ ಸೌಲಭ್ಯ : ಚಿಕ್ಕ ಬಳ್ಳಾಪುರ ದಿಂದ ಬೆಳ್ಳಗ್ಗೆ 7.30 ರಿಂದ ಸಂಜೆ 5.30 ರವರೆಗೆ 6 ಟ್ರಿಪ್ಗಳು

                                      ದೊಡ್ಡಬಳ್ಳಾಪುರ ದಿಂದ ಸಂಜೆ 3.30 ಗಂಟೆ

                                     ಬೆಂಗಳೂರಿನಿಂದ ಬೆಳಗ್ಗೆ 8-30ಕ್ಕೆ ವಯಾ ದೊಡ್ಡಬಳ್ಳಾಪುರ

 

ಕೊಠಡಿಗಳ ಮಾಹಿತಿ :      ತೋಟಗಾರಿಕೆ ಇಲಾಖೆ-         www.nandihillsreservations.in

                                     ಪ್ರವಾಸೋದ್ಯಮ ಇಲಾಖೆ www.kstdc.co.in     ,                                                                                              

                                                                              www.karnatakaholidays.net

 

ಗಿರಿಧಾಮಕ್ಕೆ ಮಾರ್ಗ: ಬೆಂಗಳೂರಿನಿಂದ ಹೈದರಾಬಾದ್ ರಸ್ತೆಯಲ್ಲಿ 36 ಕಿ.ಮಿ. ಸಾಗಿದರೆ ದೇವನಹಳ್ಳಿ. ಅಲ್ಲಿ ಎಡಕ್ಕೆ ತಿರುಗಿ 11 ಕಿ.ಮಿ ಸಾಗಿ ಗಿರಿಧಾಮದ ಕೆಳಭಾಗಕ್ಕೆ ಬಂದು ಅಲ್ಲಿ ಬಲಕ್ಕೆ ತಿರುಗಿ 8 ಕಿ.ಮಿ. ಬೆಟ್ಟ ಹತ್ತಿ ಗಿರಿಧಾಮದ ತುದಿಗೆ ತಲುಪಬಹುದು.

 

 

 

 

 

 

 

 

 

 

 

 

NANDI HILLS

Legend

Accommodation
Route to Nandi Hills
Places of Interest
Reservation

Legend

There are many stories about the orgin of the name Nandi Hills. During the Chola period, Nandi Hills was called Ananda Giri meaning The Hill of Happiness. Another story is that Yoga Nandeeshwara performed penance here, and so it was named after him. A temple of Yoga Nandeeshwara is situated on top of the hill. Nandi is also commonly called Nandidurga (Fort) because of the fort build here by the ruler Tippu Sultan. It is also perhaps called Nandi Hills because the hill resembles a sleeping bull (Nandi).

Nandi Hills has been a favourite picnic place for young enthusiasts on a weekend. The pleasant climate appeals to the old and the young alike. Lovers and honey mooners, in search of a quiet, beautiful place, and families on economised budget prefer Nandi Hills. Historians can find a wealth of information and the spiritual minded, peace and tranquility.

From Bangalore, the capital of Karnataka, Nandi Hills is a mere 60 kilometers. Nandi Hills offers a surprise of breathtaking scenic beauty and excellent climatic condition. Situated in the Chikkaballapur Taluk of Kolar District in Karnataka, Nandi Hills, at the height of 4851 feet above sea level is, the most popular picnic spot.

Accommodation

Nandi Hills provides modern, well-furnished accommodation for tourists. Nehru House, formerly Cubbon House, build by Lord Cubbon has 18 rooms and available for tourist. Gandhi House, where the Mahatma himself stayed, is under the management of DPAR (Protocol) Government of Karnataka and is reserved for the stay of important dignitaries. The Horticulture Department runs a vegetarian restaurant and the Karnataka Tourism Department runs a vegetarian / non-vegetarian restaurant "MAYURA". Nandi Hills has a well maintained road of 8 kilometers from the foothill to the top. Medical, postal, telegraph and telephone facilities are available on hill top. 

Route to Nandi Hills

On Bangalore  Bellary road, reach Devanahalli cross, which is on the 36 th milestone. Take the deviation on the left and travel 11 kilometers to reach Nandi cross. The foot of the hill is 3 kilometers from here. On the Doddaballapur road, turn right to reach the road that leads to the top of the hill. From the foot is 8 kilometers of the top.

Places of Interest

Amruth Sarovar : A beautiful water lake that brims with lucid water all the year round.

Tippus Summer Palace and Fort: During the Ganga period, the Chikkaballapur chieftains built a fort. Tippu strengthened it further and also build a rest house. This used to be Tippus summer bungalow.

Gavi Veerabhadra Swamy Temple : on the way to the Sultanpet, from Tippus palace, natural formation of huge boulders has been transformed into a temple.

Fort : The fort is on a sprawling area of 90 acres and is above 4851 feet above sea level. A soldier could hide in this well constructed fort and shoot in all four directions at the same time.

Horse Way : A stone doorway in the fort on the North-eastern side, is believed to have been the horse way for helping soldiers to climb the wall on horse back.

Palar River Origin: Palar river takes its birth as a small spring on the eastern side of the hill.

Brahmashrama : A serene place for the spiritual minded, this ashram is built by huge natural boulders.

Yoga Nandeeshwara Temple: A temple of exquisite, intricate carvings, it also has a beautiful Kalyana Mantapa.

Tippu Drop: During Tippus reign, criminals were pushed down from this point to their death as punishment.

Arkavathi River Origin: Arkavathi River takes its birth on the south-west of the hill.

Secret Passage : A secret passage on the west, is believed to have helped the Kings to escape during unforseen attacks.

Childrens Playground : The Horticulture department maintains a lovely garden for children to play games like the slides, merry-go-round, swings etc.

Muddena Halli: Muddena Halli, situated 21 kilometers from Nandi Hills, is the birthplace of Sir. M. Vishveswarayya. His ancestral home, where he was born, has been preserved for public viewing.

Apart from these, there are other interesting places like Anjaneya temple, Nellikayi Basavanna, Antaragange, Baananthi Bande, Bhoga Nandeeshwara temple etc.

 

Timings : Nandi hills is open from 6 a.m. to 6 p.m.

Bus : Government buses ply from Bangalore, Chikkaballapur and Nandigrama. It takes 2 hours from Bangalore and one hour from Chikkaballapur to reach Nandi Hills.

Climate : The temperature is 25 to 28 centigrade during summer and 8 to 10 centigrade in winter. Nandi receives a rainfall of 100 to 150 cms every year.

 

Reservation:

Reservations through online only.

Website : www.nandihillsreservations.in

For further queries, contact

SPECIAL OFFICER,
Nandi Hill Station, Chikkaballapur Taluk, 
Kolar district.

Phone:08156-2678621