ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ (PPP-IHD)

ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯು 2015-16ನೇ ಸಾಲಿನಿಂದ ಭಾರತ ಸರ್ಕಾರದ PPP-IAD ಯೋಜನೆಯ ಮಾದರಿಯಲ್ಲಿ ರಾಜ್ಯದ ತೋಟಗಾರಿಕೆ ವಲಯದ ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಕಾರ್ಯಕ್ರಮ (PPP-IHD) ಚಾಲನೆ ನೀಡಿತು.

 

          ಇದು ಯೋಜನಾ ಆಧಾರಿತ ಕಾರ್ಯಕ್ರಮವಾಗಿದ್ದು, ಖಾಸಗಿ ಸಂಸ್ಥೆಗಳು ರೈತರೊಂದಿಗೆ ಬೀಜ ದಿಂದ ಮಾರುಕಟ್ಟೆಯವರೆಗೆ ತಾಂತ್ರಿಕ ಸಹಕಾರ ನೀಡುವುದರೊಂದಿಗೆ ಉತ್ಪಾದಿತ ವೇಳೆಗೆ ನಿರ್ಧಿಷ್ಠ ಬೆಲೆ ನೀಡ ಬೇಕಾಗಿರುತ್ತದೆ. ಈ ಯೋಜನೆಯಡಿ ಹೂಡಿಕೆ ಮಾಡಿರುವ ಪಾಲುದಾರರಿಗೆ ಸರ್ಕಾರದಿಂದ ಘಟಕವಾರು ಸಹಾಯಧನ ನೀಡುತ್ತದೆ.

 

Key Features:

 

 •  2015-16ನೇ ಸಾಲಿನಿಂದ ಸರ್ಕಾರದ PPP-IAD ಯೋಜನೆಯ ಮಾದರಿಯಲ್ಲಿ ಪ್ರಾರಂಭಿಸಿದೆ.

 • ಇಲ್ಲಿಯವರೆಗೆ ಒಟ್ಟು 22 ಪ್ರಾಯೋಜನೆಗಳು ಅನುಮೋದನೆಗೊಂಡಿರುತ್ತದೆ. ಇವುಗಳ ಒಟ್ಟು ಯೋಜನಾ ವೆಚ್ಚ ರೂ.101.9 ಕೋಟಿಗಳಷ್ಟಾಗಿರುತ್ತದೆ

 • 18 ಪ್ರಾಯೋಜನೆಗಳು ಅನುಷ್ಠಾನದಲ್ಲಿರುತ್ತದೆ.

 •  3 ಪ್ರಾಯೋಜನೆಗಳ ಅನುಷ್ಠಾನ ಪೂರ್ಣಗೊಂಡಿರುತ್ತದೆ.

 •  ಸದರಿ ಕಾರ್ಯಕ್ರಮದಲ್ಲಿ ಒಳಗೊಂಡಿರುವ ರೈತರ ಸಂಖ್ಯೆ 6155.

 • ಸದರಿ ಕಾರ್ಯಕ್ರಮದಲ್ಲಿ ಒಳಗೊಂಡಿರುವ ಪ್ರದೇಶ 10134 ಎಕರೆ.

 • ಪ್ರಮುಖ ಬೆಳೆಗಳು ಬಾಳೆ, ತರಕಾರಿ, ಸಾಂಬಾರು ಬೆಳೆ, ಸುಗಂಧ ದ್ರವ್ಯ ಬೆಳೆಗಳು.

 • 1ತ್ರಿಪಕ್ಷೀಯ ಒಡಂಬಡಿಕೆ ರೈತರು / FPO, ಖಾಸಗಿ ಸಂಸ್ಥೆ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆ.

 • ಗುಚ್ಚ ಆಧಾರಿತ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಿಗೆ ಮೌಲ್ಯ ಸರಪಳಿ ನಿರ್ಮಿಸುವುದರೊಂದಿಗೆ ನೇರ ಮಾರುಕಟ್ಟೆ ಕಲ್ಪಿಸುವುದು ಪ್ರಮುಖ ಉದ್ದೇಶವಾಗಿರುತ್ತದೆ.

 

 

 

ರೈತ ಉತ್ಪಾದಕರ ಸಂಸ್ಥೆ (Farmer Producers Organization)

ಪರಿಚಯ:

ತೋಟಗಾರಿಕೆ ರಂಗದಲ್ಲಿ ರೈತರು ಅದರಲ್ಲೂ ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ತೋಟಗಾರಿಕೆ ಬೆಳೆಗಳ ಉತ್ಪಾದನೆ, ತಾಂತ್ರಿಕತೆ, ಪರಿಕರಗಳ ಸರಬರಾಜು, ಮಾರುಕಟ್ಟೆ, ಹೂಡಿಕೆ ಇತ್ಯಾದಿಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಲು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಸಂಘಟಿಸಿ, ಸ್ವಯಂ ಅಧಿಕಾರಯುಕ್ತ ರೈತ ಉತ್ಪಾದಕರ ಸಂಸ್ಥೆಗಳನ್ನು (FPO) ಸ್ಥಾಪಿಸಿ, ಕಂಪನಿ ಅಧಿನಿಯಮ 2013 ಅಡಿಯಲ್ಲಿ ನೊಂದಾಯಿಸುವುದು. ರೈತರು ಆರ್ಥಿಕ ಸಧೃಡತೆಯನ್ನು ಹೊಂದಲು ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು FPO ಗಳು ನೆರವಾಗುವ ಉದ್ದೇಶವನ್ನು ಹೊಂದಿರುತ್ತದೆ.

 

ತೋಟಗಾರಿಕೆ ಇಲಾಖೆಯ ವತಿಯಿಂದ 2014-15ನೇ ಸಾಲಿನಿಂದ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದ್ದು, ಮೊದಲನೇ ಹಂತದಲ್ಲಿ (2014-15) 58 ಹಾಗೂ ಎರಡನೇ ಹಂತದಲ್ಲಿ (2015-16) 34 ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ. ಪ್ರಸ್ತುತ 87 FPO ಗಳನ್ನು ಕಂಪನಿ ಕಾಯ್ದೆ 2013 ರಡಿ ನೊಂದಾಯಿಸಲಾಗಿದ್ದು, ಉಳಿದಂತೆ 5 FPO ಗಳ ನೊಂದಣಿ ವಿವಿಧ ಹಂತದಲ್ಲಿರುತ್ತದೆ.

 

ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಗಳ ಪ್ರಗತಿ:

 • 73 FPO ಗಳಿಗೆ CHC ನಿರ್ಮಾಣಕ್ಕೆ ಶೇ.90 ಸಹಾಯಧನದಂತೆ ಒಟ್ಟು ರೂ.14.92 ಕೋಟಿ ಸಹಾಯಧನವನ್ನು ಒದಗಿಸಲಾಗಿದೆ. (ಗರಿಷ್ಠ ರೂ.22.50 ಲಕ್ಷ ಪ್ರತಿ FPOಗೆ).

 • 76 FPO ಗಳಿಗೆ ದುಡಿಯುವ ಬಂಡವಾಳವಾಗಿ ಒಟ್ಟು ರೂ.11.40 ಕೋಟಿ ನೀಡಲಾಗಿದೆ    (ರೂ.15.00 ಲಕ್ಷ ಪ್ರತಿ FPOಗೆ)

 • 60 FPOಗಳು ಪರಿಕರಗಳ ವ್ಯಾಪಾರವನ್ನು ಪ್ರಾರಂಭಿಸಿರುತ್ತಾರೆ.

 • 44 FPOಗಳು ಉತ್ಪನ್ನಗಳ ವ್ಯಾಪಾರವನ್ನು ಪ್ರಾರಂಭಿಸಿದ್ದು APMC ಪರವನಗಿ ಪಡೆದಿರುತ್ತಾರೆ.

 • 20 FPO ಗಳು ಸದಸ್ಯ ರೈತರ ಉತ್ಪನ್ನಗಳ ಮಾರಾಟವನ್ನು ಕೈಗೊಂಡಿರುತ್ತಾರೆ.

 • PPP-IHD ಯೋಜನೆಯಡಿ 5 FPO ಗಳನ್ನು ಕಾರ್ಪೊರೇಟ್ / ಖಾಸಗಿ ಸಂಸ್ಥೆಯೊಂದಿಗೆ ಸಂಪರ್ಕಿಸಲಾಗಿದೆ.

          

(